Telegram Join My Telegram WhatsApp Join My WhatsApp

KEA Recruitment 2026: 5,431 FDC, SDC ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಹಂಚಿಕೊಳ್ಳಿ

 

KEA Recruitment 2026: 5,431 FDC, SDC ಹುದ್ದೆಗಳ ನೇಮಕಾತಿ! 33 ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಅವಕಾಶ

ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಉದ್ಯೋಗ ಪಡೆಯಬೇಕು ಎಂದು ಕಾಯುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA) ಮಹತ್ವದ ಸುದ್ದಿ ಹೊರಬಿದ್ದಿದೆ. ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಇರುವ ಒಟ್ಟು 5,431 ಹುದ್ದೆಗಳ ಭರ್ತಿಗಾಗಿ KEA ನೇಮಕಾತಿ 2026 ಅಧಿಸೂಚನೆ ಪ್ರಕಟಿಸಿದೆ. ಈ ನೇಮಕಾತಿಯಲ್ಲಿ ಪ್ರಥಮ ದರ್ಜೆ ಸಹಾಯಕರು (FDC), ದ್ವಿತೀಯ ದರ್ಜೆ ಸಹಾಯಕರು (SDC) ಸೇರಿದಂತೆ ವಿವಿಧ ಸಮಾನಾಂತರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಕರ್ನಾಟಕದ ಒಟ್ಟು 33 ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದ್ದು, ಪದವಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗ ಪಡೆಯಲು ಉತ್ತಮ ಅವಕಾಶ ಲಭ್ಯವಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಪ್ರಕ್ರಿಯೆ 2026ರ ಅಕ್ಟೋಬರ್ 30ರಿಂದ ಆರಂಭವಾಗಿದ್ದು, ನವೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ ಮತ್ತು ಪರೀಕ್ಷಾ ದಿನಾಂಕಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವುದು ಮುಖ್ಯವಾಗಿದೆ.

KEA Recruitment 2026 – ಪ್ರಮುಖ ವಿವರಗಳು

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಪ್ರಕ್ರಿಯೆ ಕೈಗೊಂಡಿದೆ. ನೇಮಕಾತಿಗೆ ಸಂಬಂಧಿಸಿದ ಪ್ರಮುಖ ವಿವರಗಳು ಈ ಕೆಳಗಿನಂತಿವೆ

  • ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
  • ನೇಮಕಾತಿ ಹೆಸರು: KEA Recruitment 2026
  • ಒಟ್ಟು ಹುದ್ದೆಗಳು: 5,431
  • ಹುದ್ದೆಗಳ ಹೆಸರು: FDC ಮತ್ತುSDC  ಸಮಾಂತರ ಹುದ್ದೆಗಳು
  • ಒಟ್ಟು ಇಲಾಖೆಗಳು: 33
  • ಉದ್ಯೋಗ ಸ್ಥಳ: ಕರ್ನಾಟಕ
  • ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್
  • ಅಧಿ ಸೂಚನೆ ಪ್ರಕಟಣೆ 29 ಅಕ್ಟೋಬರ್ 2026
  • ಅರ್ಜಿ ಆರಂಭದ ದಿನಾಂಕ: 30 ಅಕ್ಟೋಬರ್ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26 ನವೆಂಬರ್ 2026
  • ಪರೀಕ್ಷಾ ದಿನಾಂಕಗಳು: 8,9,10,16 ಮತ್ತು 17 ಜನವರಿ 2027

5,431 ಹುದ್ದೆಗಳ ಸಂಪೂರ್ಣ ಮಾಹಿತಿ

ಈ ನೇಮಕಾತಿಯಲ್ಲಿ ಕರ್ನಾಟಕದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು5,431 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.ಈ ಹುದ್ದೆಗಳನ್ನು ಉಳಿಕೆ ಮೂಲವೃಂದ (RPC) ಮತ್ತು ಕಲ್ಯಾಣ ಕರ್ನಾಟಕ ವೃಂದ (KK) ಎಂದು ವಿಂಗಡಿಸಲಾಗಿದೆ.

ಹುದ್ದೆಗಳ ವಿವರ ಈ ಕೆಳಗಿನಂತಿವೆ.

     ಹುದ್ದೆಗಳ ವಿಭಾಗ       ಹುದ್ದೆಗಳ ಸಂಖ್ಯೆ
   RPC ಪದವಿ ಮಟ್ಟದ                 ಹುದ್ದೆಗಳು              2,163
    RPC PUC ಮಟ್ಟದ                   ಹುದ್ದೆಗಳು              2,070
     KK FDC ಹುದ್ದೆಗಳು               563
     KK SDC ಹುದ್ದೆಗಳು               635
   ಒಟ್ಟು ಹುದ್ದೆಗಳ ಸಂಖ್ಯೆ              5,431

 

ಈ ಹುದ್ದೆಗಳ ನೇಮಕಾತಿಯಲ್ಲಿ ಪ್ರಥಮ ದರ್ಜೆ ಸಹಾಯಕರು (FDC), ದ್ವಿತೀಯ ದರ್ಜೆ ಸಹಾಯಕರು (SDC) ಹಾಗೂ ವಿವಿಧ ಇಲಾಖೆಗಳಲ್ಲಿನ ಸಮಾನಾಂತರ ಹುದ್ದೆಗಳು ಸೇರಿವೆ.

ಇದರೊಂದಿಗೆ ಲೆಕ್ಕ ಸಹಾಯಕರು, ಕಿರಿಯ ಸಹಾಯಕರು, ಗ್ರಾಮ ಪಂಚಾಯತಿಯಲ್ಲಿ ಕಾರ್ಯದರ್ಶಿಗಳು ವಾರ್ಡನ್,ಹಾಸ್ಟೆಲ್ ಮೇಲ್ವಿಚಾರಕರು ಸೇರಿದಂತೆ ವಿವಿಧ ಇಲಾಖೆಗಳ ಹುದ್ದೆಗಳೂ ಅಧಿಸೂಚನೆ ಒಳಪಟ್ಟಿವೆ.

ಶೈಕ್ಷಣಿಕ ವಿದ್ಯಾರ್ಹತೆ ಏನಿರಬೇಕು?

KEA ನೇಮಕಾತಿ 2026 ರಲ್ಲಿ ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಹುದ್ದೆಗಳ ಆಧಾರದ ಮೇಲೆ ಶೈಕ್ಷಣಿಕ ಅರ್ಹತೆ ಬದಲಾಗುತ್ತದೆ.

1.ಪದವಿ ವಿದ್ಯಾರ್ಹತೆ

ಪದವಿ ಮಟ್ಟದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದಪದವಿಪೂರ್ಣಗೊಳಿಸಿರಬೇಕು. FDC ಮತ್ತು ಇತರೆ ಪದವಿ ಮಟ್ಟದ ಹುದ್ದೆಗಳಿಗೆ ಸಂಬಂಧಿಸಿದಂತೆ ಅಧಿಸೂಚನೆಯಲ್ಲಿ ತಿಳಿಸಿರುವ ನಿರ್ಧಿಷ್ಟ ವಿದ್ಯಾರ್ಹತೆಯನ್ನು ಹೊಂದಿರಬೇಕು.

2.ದ್ವಿತೀಯ ಪಿಯುಸಿ ವಿದ್ಯಾರ್ಹತೆ

SDC ಮತ್ತು ಇತರೆ ಪಿಯುಸಿ ಮಟ್ಟದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿ ಅಥವಾ ಅದಕ್ಕೆ ತಕ್ಕಂತ ಸಮಾನ ವಿದ್ಯಾರ್ಹತೆ ಯನ್ನು ಹೊಂದಿರಬೇಕು.

3.ವಿಶೇಷ ವಿದ್ಯಾರ್ಹತೆ

ಕೆಲವು ಇಲಾಖೆಗಳಲ್ಲಿನ ಹುದ್ದೆಗಳಿಗೆ ನಿರ್ಧಿಷ್ಟ ವಿಷಯದಲ್ಲಿ ಪದವಿ,ಡಿಪ್ಲೊಮಾ ಅಥವಾ ಕಂಪ್ಯೂಟರ್ ಜ್ಞಾನ ಸೇರಿದಂತೆ ಹೆಚ್ಚುವರಿ ಅರ್ಹತೆಗಳು ಬೇಕಾಗಬಹುದು.

ಆದ್ದರಿಂದ ಅಭ್ಯರ್ಥಿಗಳು ತಾವು ತಮಗೆ ಅರ್ಜಿ ಸಲ್ಲಿಸಲು ನೀಡಿರುವ ಹುದ್ದೆಯ ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ವಿದ್ಯಾರ್ಹತೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.

ವಯೋಮಿತಿ ವಿವರ

KEA ನೇಮಕಾತಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.ಗರಿಷ್ಠ ವಯೋಮಿತಿಯ ಅಭ್ಯರ್ಥಿಗಳ ವಯಸ್ಸಿಗೆ ಅನುಗುಣವಾಗಿರುತ್ತದೆ.

  • ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ.
  • 2A,2B,3A ಮತ್ತು 3B ಅಭ್ಯರ್ಥಿಗಳಿಗೆ ಗರಿಷ್ಠ 43 ವರ್ಷ.
  • SC,ST ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ.

ಸರ್ಕಾರದ ನಿಮಯದ ಅನುಸಾರವಾಗಿ ಅದರ ಪ್ರಕಾರ ಅರ್ಹ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.ವಯಸ್ಸು ಲೆಕ್ಕಾಚಾರದ ದಿನಾಂಕ ಮತ್ತು ಇತರೆ ಷರತ್ತುಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬೇಕು.

ಅರ್ಜಿ ಸುಲ್ಕದ ವಿವರ

ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಮ್ಮ ವರ್ಗಕ್ಕೆ ಅನುಗುಣವಾಗಿ ನಿಗದಿಪಡಿಸಿರುವ ಅರ್ಜಿ ಸುಲ್ಕವನ್ನು ಪಾವತಿಸಬೇಕು.

      ಅಭ್ಯರ್ಥಿಗಳ ವರ್ಗ         ಒಟ್ಟು ಶುಲ್ಕ
     GM,2A,2B,3A,3B           ₹750
  SC,ST,ಪ್ರವರ್ಗ -1,     ಮಾಜಿ ಸೈನಿಕರು ಮತ್ತು       ತೃತೀಯ ಲಿಂಗ            ₹500
    ವಿಶೇಷ ಚೇತನ       ಅಭ್ಯರ್ಥಿಗಳು (PwD)             ₹250

 

ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕಾಗುತ್ತದೆ.ಪಾವತಿ ಮಾಡುವ ಮೊದಲುವಧಿಸುಚನೆಯಲ್ಲಿ ನೀಡಿರುವ ಅಧಿಕೃತ ಮಾಹಿತಿಯನ್ನು ಪರಿಶೀಲಿಸಿಕೊಂಡು ಶುಲ್ಕದ ವಿವರವನ್ನು ಪರಿಶೀಲಿಸಿ.

KEA ಪರೀಕ್ಷಾ ದಿನಾಂಕಗಳ ವಿವರ

ಈ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಪರೀಕ್ಷೆಗಳನ್ನು 2027 ರ ಜನವರಿ ತಿಂಗಳಲ್ಲಿ ವಿವಿಧಬಿನಂಕಗಳಲ್ಲಿ ನೆಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.

      ಪರೀಕ್ಷೆಯ ವಿವರ          ದಿನಾಂಕ
   ಕನ್ನಡ ಭಾಷೆಯ ಪರೀಕ್ಷೆ       8 ಜನವರಿ 2027
 ಪದವಿ ಮಟ್ಟದ KK     ಪರೀಕ್ಷೆ       9 ಜನವರಿ 2027
 ಪದವಿ ಮಟ್ಟದ RPC     ಪರೀಕ್ಷೆ      10 ಜನವರಿ 2027
ಪಿಯುಸಿ ಮಟ್ಟದ KK ಪರೀಕ್ಷೆ      16 ಜನವರಿ 2027
ಪಿಯುಸಿ ಮಟ್ಟದ RPC ಪರೀಕ್ಷೆ      17 ಜನವರಿ 2027

 

ಅಭ್ಯರ್ಥಿಗಳ ಪರೀಕ್ಷೆಗೆ ಸಂಬಂಧಿಸಿದ ಪ್ರವೇಶ ಪತ್ರ ಹಾಲ್ ಹಾಲ್ ಟಿಕೆಟ್ ಪರೀಕ್ಷೆ ಕೇಂದ್ರ ಮತ್ತು ವೇಳಾಪಟ್ಟಿಯ ಮಾಹಿತಿಗಾಗಿ (KEA) ಅಧಿಕೃತ ವೆಬ್ಸೈಟ್ ಅನ್ನು ಪರಿಶೀಲಿಸುತ್ತಿರಬೇಕು.

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

KEA ನೇಮಕಾತಿಯಲ್ಲಿ ಅಭ್ಯರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂಬಂಧಪಟ್ಟ ಹುದ್ದೆಗೆ ನಿಗದಿಪಡಿಸಿರುವ ಆಯ್ಕೆ ನಿಯಮಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆಯ ಪ್ರಮುಖ ಹಂತಗಳು

  1. ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ.
  2. ಅನ್ವಯಿಸುವ ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಪರೀಕ್ಷೆ
  3. ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುವುದು.
  4. ಮೂಲ ದಾಖಲೆಗಳ ಪರಿಶೀಲನೆ.
  5. ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆ.

ಪ್ರತಿಯೊಂದು ಹುದ್ದೆಗೆ ಅನ್ವಯಿಸುವ ಆಯ್ಕೆ ವಿಧಾನದಲ್ಲಿ ವ್ಯತ್ಯಾಸವಿರಬಹುದು.ಆದ್ದರಿಂದ ಅಭ್ಯರ್ಥಿಗಳ ತಮ್ಮ ಹುದ್ದೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಓದಿಕೊಳ್ಳಬೇಕು.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ

ಅರ್ಹ ಅಭ್ಯರ್ಥಿಗಳು KEA ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸುವ ಹಂತಗಳು ಈ ಕೆಳಗಿನಂತಿವೆ

1.ಮೊದಲಿಗೆ KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
2.ಮುಖಪುಟದಲ್ಲಿರುವ Recruitment ವಿಭಾಗವನ್ನು ತೆರೆಯಿರಿ.
3.KEA Recruitment 2026 ಸಂಬಂಧಿತ ಅಧಿಸೂಚನೆಯನ್ನು ಆಯ್ಕೆಮಾಡಿ.
4.ನಿಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಸಂಬಂಧಿಸಿದ ಹುದ್ದೆ ಮತ್ತು RPC ಅಥವಾ KK ವೃಂದವನ್ನು ಆಯ್ಕೆಮಾಡಿ.
5.ಹೊಸ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
6.ನಿಮ್ಮ ವೈಯಕ್ತಿಕ ಮಾಹಿತಿ, ವಿದ್ಯಾರ್ಹತೆ ಮತ್ತು ಅಗತ್ಯ ವಿವರಗಳನ್ನು ಭರ್ತಿ ಮಾಡಿ.
7.ಅಗತ್ಯ ದಾಖಲೆಗಳು, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
8.ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿಸಿ.
9.ಅರ್ಜಿಯಲ್ಲಿರುವ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ.
10.ಅಂತಿಮವಾಗಿ ಅರ್ಜಿಯನ್ನು ಸಲ್ಲಿಸಿ, ಅದರ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಇಟ್ಟುಕೊಳ್ಳಿ.

ಅಧಿಕೃತ ವೆಬ್‌ಸೈಟ್: https://cetonline.karnataka.gov.in/kea/

ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಉತ್ತಮ.

  1. ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ.
  2. ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ.
  3. ಪಿಯುಸಿ ಅಂಕಪಟ್ಟಿ.
  4. ಪದವಿ ಪ್ರಮಾಣಪತ್ರ (ಅನ್ವಯಿಸಿದರೆ).
  5. ಜಾತಿ ಮತ್ತು ಆದಾಯ ಪ್ರಮಾಣಪತ್ರ (ಅನ್ವಯಿಸಿದರೆ).
  6. ಕಲ್ಯಾಣ ಕರ್ನಾಟಕ ಪ್ರಮಾಣಪತ್ರ (ಅನ್ವಯಿಸಿದರೆ).
  7. ಇತ್ತೀಚಿನ ಭಾವಚಿತ್ರ.
  8. ಸಹಿ ಮತ್ತು ಅಗತ್ಯವಿರುವ ಇತರೆ ದಾಖಲೆಗಳು.

ಪ್ರಮುಖ ದಿನಾಂಕಗಳನ್ನು ಗಮನಿಸಿ
ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ದಿನಾಂಕಗಳನ್ನು ತಪ್ಪಿಸಿಕೊಳ್ಳಬಾರದು.

  • ಅಧಿಸೂಚನೆ ಪ್ರಕಟಣೆ: 29-10-2026
  • ಅರ್ಜಿ ಆರಂಭ: 30-10-2026
  • ಅರ್ಜಿ ಸಲ್ಲಿಸಲು ಕೊನೆಯ ದಿನ: 25-11-2026
  • ಶುಲ್ಕ ಪಾವತಿಸಲು ಕೊನೆಯ ದಿನ: 26-11-2026
  • ಪರೀಕ್ಷೆಗಳು: 08, 09, 10, 16 ಮತ್ತು 17-01-2026

ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQ)

1. KEA Recruitment 2026ರಲ್ಲಿ ಒಟ್ಟು ಎಷ್ಟು ಹುದ್ದೆಗಳಿವೆ?

ಕರ್ನಾಟಕದ 33 ಸರ್ಕಾರಿ ಇಲಾಖೆಗಳಲ್ಲಿ ಒಟ್ಟು 5,431 ಹುದ್ದೆಗಳ ನೇಮಕಾತಿ ನಡೆಯಲಿದೆ.

2. ಈ ನೇಮಕಾತಿಯಲ್ಲಿ ಯಾವ ಹುದ್ದೆಗಳು ಸೇರಿವೆ?

FDC, SDC ಮತ್ತು ವಿವಿಧ ಇಲಾಖೆಗಳ ಸಮಾನಾಂತರ ಹುದ್ದೆಗಳು ಸೇರಿವೆ.

3. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

25 ನವೆಂಬರ್ 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

4. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ ಯಾವುದು?

26 ನವೆಂಬರ್ 2026 ಕೊನೆಯ ದಿನಾಂಕವಾಗಿದೆ.

5. ಪರೀಕ್ಷೆಗಳು ಯಾವಾಗ ನಡೆಯಲಿವೆ?

2027ರ ಜನವರಿ 8, 9, 10, 16 ಮತ್ತು 17ರಂದು ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.

6. ಅರ್ಜಿ ಎಲ್ಲಿ ಸಲ್ಲಿಸಬೇಕು?

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

APPLY LINK

 

ಇದನ್ನು ಓದಿರಿ: BSF SI Recruitment 2026: 1,167 ಹುದ್ದೆಗಳು, ₹1.12 ಲಕ್ಷ ಸಂಬಳ! ಅರ್ಜಿ ಆರಂಭ

ಕೊನೆಯ ಮಾತು

ಕರ್ನಾಟಕದಲ್ಲಿ ಸರ್ಕಾರಿ ಹುದ್ದೆ ಪಡೆಯಬೇಕೆಂದು ಕನಸು ಕಾಣುತ್ತಿರುವ ಪ್ರತಿಯೊಬ್ಬ ಅಭ್ಯರ್ಥಿಗಳು KEA Recruitment 2026 ರ 5,431 ಹುದ್ದೆಗಳ ನೇಮಕಾತಿ ನಡೆಯುತ್ತಿರುವುದರಿಂದ ಪ್ರತಿಯೊಬ್ಬ ಅಭ್ಯರ್ಥಿಗಳ ಒಂದು ಉತ್ತಮ ಅವಕಾಶವಾಗಿದೆ.ಈ ಅವಕಾಶವನ್ನು ಎಲ್ಲಾ ಪ್ರತಿಯೊಬ್ಬ ಅಭ್ಯರ್ಥಿಗಳು ಸದುಪಯೋಗ ಪಡೆದು ಕೊಳ್ಳಬೇಕು.

ಅರ್ಜಿ ಸಲ್ಲಿಸುವ ಮೊದಲು ನಿಮ್ಮ ವಿದ್ಯಾರ್ಹತೆಗೆ ಹೊಂದುವ ಹುದ್ದೆಯನ್ನು ಆಯ್ಕೆಮಾಡಿ, ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಎಲ್ಲಾ ನಿಯಮಗಳನ್ನು ಪರಿಶೀಲಿಸಿ. ಕೊನೆಯ ದಿನಾಂಕದವರೆಗೆ ಕಾಯದೆ ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸಿ. ನೇಮಕಾತಿಗೆ ಸಂಬಂಧಿಸಿದ ಮುಂದಿನ ಮಾಹಿತಿಗಾಗಿ KEA ಅಧಿಕೃತ ವೆಬ್‌ಸೈಟ್ ಅನ್ನು ಗಮನಿಸುತ್ತಿರಿ.

ಈ ಅವಕಾಶವನ್ನು ಎಲ್ಲಾ ಅಭ್ಯರ್ಥಿಗಳು ಬಳಸಿಕೊಳ್ಳಬೇಕು ನೀವು ಓದುವ ರೀತಿ ಮತ್ತು ವಿಷಯಗಳಿಗೆ ನೀಡುವಂತವ  ಸಮಯ ಬಹಳ ಪ್ರಾಮುಖ್ಯವಾದುದು ಏಕೆಂದರೆ ಕಳೆದು ಓಗುವ ಸಮಯ ಮತ್ತೆ ಮರಳಿ ಬರುವುದಿಲ್ಲ ಅದಕ್ಕಾಗಿ ಅರ್ಜಿಸಲ್ಲಿಸುವ ಎಲ್ಲಾ ನನ್ನ ಅಭ್ಯರ್ಥಿಗಳು ನಿಮ್ಮದೇ ಆದ ಒಂದು ಟೈಮ್ schedule ಅನ್ನು ಹಾಕಿಕೊಂಡು ಅಚ್ಚುಕಟ್ಟಾಗಿ ವಿಷಯಗಳ ಅರ್ಥವನ್ನ ಮತ್ತೆ ಶಿಸ್ತಿನ ಓದುನ್ನು ಸರಿಯಾದ ಸಮಯ ಪಾಲನೆ ಮಾಡುತ್ತಾ ನಿಮ್ಮ ಯೋಚನೆ ಮತ್ತು ಗುರಿ ಎಲ್ಲವನ್ನು ನೀವು ನೀಡುತ್ತಿರುವ ಮತ್ತು ಮಾಡುತ್ತಿರುವ ಕೆಲಸದ ಮೇಲೆ focus ಇಟ್ಟರೆ ನೀವು ಪಟ್ಟ ಅಂತಹ ಕಷ್ಟ ಮತ್ತು ನೀವು ಮಾಡುತ್ತಿರುವ struggle and hard work ಎಂದು ಕೈಬಿಡಲ್ಲ ಅಂತ ಹೇಳಬಹುದು

ಏಕೆಂದರೆ ಕಲಿತ ವಿಧ್ಯೆ ನಾವು ಮಾಡುತ್ತಿರುವ  ಕೆಲಸದ ಮೇಲೆ ನಂಬಿಕೆ ಇಟ್ಟರೆ ಆ ನಂಬಿಕೆಗೆ ಏನು ಕೇಡು ದೊರಕದು.ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಎಂದಿಗೂ ಹಾಳಾಗುವುದಿಲ್ಲ ಅದಕ್ಕೆ ತಕ್ಕ ಪ್ರತಿಫಲವನ್ನ ನಾವು ಕೊಂಡುಕೊಳ್ಳಬಹುದು ಅದು ನಮ್ಮಲ್ಲಿ ಇದೆ ಹೇಗೆಂದರೆ ನಾವು ಮಾಡುತ್ತಿರುವ ಕೆಲಸ ನಮ್ಮ ಶ್ರಮದಮೇಲೆ ನಂಬಿಕೆ ಇದ್ದಾಗ ಮಾತ್ರ ಸಾಧ್ಯ.

ಇದನ್ನು ಓದಿರಿ: KFD Recruitment 2026:SSLC ಪಾಸಾದವರಿಗೆ 750 ಹುದ್ದೆಗಳಿಗೆ ಭರ್ಜರಿ Amazing ಸುವರ್ಣಾವಕಾಶ, ತಕ್ಷಣ ಅರ್ಜಿ ಹಾಕಿ

Leave a Comment