Telegram Join My Telegram WhatsApp Join My WhatsApp

KEA B.Ed Admission 2026: Good News! ಎರಡು ವರ್ಷದ ಬಿ.ಇಡಿ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ

ಈ ಸುದ್ದಿಯನ್ನು ಹಂಚಿಕೊಳ್ಳಿ

 

KEA B.ED Admission 2026: ಎರಡು ವರ್ಷದ ಬಿ. ಇಡಿ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ ನವೆಂಬರ್ 30 ಕೊನೆಯ ದಿನ

ಕರ್ನಾಟಕ ರಾಜ್ಯದಲ್ಲಿ ಶಿಕ್ಷಕರಾಗುವ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA) ಪ್ರಮುಖ ಸುದ್ದಿಯೊಂದು ಹೊರಬಿದ್ದಿದೆ.2026-27 ನೇ ಸಾಲಿನ ಎರಡು ವರ್ಷಗಳ ಬಿ. ಇಡಿ ( Bachelor of Education) ಕೋರ್ಸುಗಳ ಪ್ರವೇಶತಿಗಾಗಿ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಪ್ರಕಟಿಸಿದೆ.

ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಬಿ.ಇಡಿ ಕೋರ್ಸ್ ಪ್ರಮುಖವಾದದ್ದು,ರಾಜ್ಯದ ಸರ್ಕಾರಿ,ಅನುದಾನಿತ ಹಾಗೂ ಅನುದಾನರಹಿತ ಬಿ.ಇಡಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಈ ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 19 ನವೆಂಬರ್ 2026ರಂದು ಈ ಕುರಿತು ಪ್ರಕಟಣೆ ಹೊರಡಿಸಿದೆ ಪ್ರಕಟಣೆಯ ಪ್ರಕಾರ, ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದರ ಜೊತೆಗೆ ಅಗತ್ಯ ದಾಖಲೆಗಳ ಪರಿಶೀಲನೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕವಾಗಿದ್ದು, ಅಸಕ್ತ ಅಭ್ಯರ್ಥಿಗಳು ಕೊನೆಯ ಕ್ಷಣದವರೆಗೆ ಕಾಯದೆ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಉತ್ತಮ

KEA B.ED Admission 2026: ಅಧಿಸೂಚನೆಯ ಪ್ರಮುಖ ಮಾಹಿತಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2026-27 ನೇ ಶೈಕ್ಷಣಿಕ ಸಾಲಿನ ಎರಡು ವರ್ಷಗಳ ಬಿ.ಇಡಿ ಕೋರ್ಸ್ ಗಳ ಪ್ರವೇಶತಿಗಾಗಿ ಈ ಪ್ರಕಟಣೆಯನ್ನು ಹೊರಡಿಸಿದೆ.

ಈ ಪ್ರವೇಶ ಪ್ರಕ್ರಿಯೆಯು ಕರ್ನಾಟಕ ಸರ್ಕಾರದ ಸಂಬಂಧಿತ ಕಾಯ್ದೆಗಳು ಮತ್ತು ನಿಯಮಗಳ ಅಡಿಯಲ್ಲಿ ನಡೆಯಲಿದೆ.ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರವೇಶ ಮತ್ತು ಶುಲ್ಕ ನಿರ್ಧಾರಕ್ಕೆ ಸಂಬಂಧಿತ 2006ರ ಕಾಯ್ದೆ ಹಾಗೂ ಸರ್ಕಾರಿ ಸೀಟುಗಳ ಪ್ರವೇಶಕ್ಕೆ ಸಂಬಂಧಿಸಿದ ನಿಯಮಗಳನ್ನು ಆಧರಿಸಿ ಪ್ರವೇಶಾತಿ ಪ್ರಕ್ರಿಯೆಯನ್ನು ನೆಡಸಲಾಗುತ್ತದೆ ಎಂದು KEA ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಅಧಿಸೂಚನೆಯ ವಿವರಗಳು:

  • ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
  • ಕೋರ್ಸ್: ಎರಡು ವರ್ಷಗಳ B. ED
  • ಶೈಕ್ಷಣಿಕ ವರ್ಷ:2026-27
  • ಪ್ರವೇಶಾತಿ ಪ್ರಕ್ರಿಯೆಯು ಆನ್ಲೈನ್
  • ಪ್ರಕಟಣೆ ದಿನಾಂಕ: 19-11-2026
  • ಅರ್ಜಿ ಆರಂಭ: 20-11-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-11-2026
  • ಶುಲ್ಕ ಪಾವತಿಗೆ ಕೊನೆಯ ದಿನಾಂಕ: 02-12-    2026

KEA B.ED online Application 2026 ಅರ್ಜಿ ಸಲ್ಲಿಕೆ ಆರಂಭ

KEA ಪ್ರಕಟಿಸಿರುವ ವೇಳಾಪಟ್ಟಿ ಪ್ರಕಾರ, ಬಿ.ಇಡಿ ಕೋರ್ಸ್ ಪ್ರವೇಶತಿಗಾಗಿ ಸಂಬಂಧಿಸಿದ ಆನ್ಲೈನ್ ಅರ್ಜಿ ಹಾಗೂ ದಾಖಲೆಗಳ ಪರಿಶೀಲನೆಗೆ ಮಾಡ್ಯೂಲ್ 20 ನವೆಂಬರ್ 2026 ರಂದು ಮಧ್ಯಾಹ್ನ 12 ಗಂಟೆಯಿಂದ ಶುರುವಾಗಲಿದೆ.

ಅಭ್ಯರ್ಥಿಗಳು KEA ನಿಗದಿಪಡಿಸಿರುವ ಆನ್ಲೈನ್ ವ್ಯವಸ್ಥೆಯ ಮೂಲಕ ತಮ್ಮ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಆರಂಭಿಸಬಹುದು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಗತ್ಯವಿರುವ ಮಾಹಿತಿಯನ್ನು ಸರಿಯಾಗಿ ನಮೂದಿಸುವುದು ಮುಖ್ಯವಾಗಿದೆ.

ಅಭ್ಯರ್ಥಿಗಳ ಅರ್ಜಿ ಸಲ್ಲಿಸುವಾಗ ತಮ್ಮ ವೈಯಕ್ತಿಕ ವಿವರಗಳು ಮತ್ತು ಶೈಕ್ಷಣಿಕ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಬೇಕು. ಯಾವುದೇ ತಪ್ಪು ಮಾಹಿತಿ ನಮೂದಿಸಿದಂತೆ ಎಚ್ಚರಿಕೆ ವಹಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?

KEA B.Ed Admission 2026: ಬಿಡುಗಡೆ ಮಾಡಿರುವ ಅಧಿಕೃತ ವೇಳಾಪಟ್ಟಿಯ ಪ್ರಕಾರ ಬಿ.ಇಡಿ ಕೋರ್ಸ್ ಪ್ರವೇಶಾತಿಗಾಗಿ ಆನ್ ಲೈನ್ ಅರ್ಜಿ ಸಲ್ಲಿಸಲು 30 ನವೆಂಬರ್ 2026 ಕೊನೆಯ ದಿನಾಂಕವಾಗಿದೆ.

ಅಂದು ರಾತ್ರಿ 11:59 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.ಆದ್ದರಿಂದ ಅರ್ಹ ಆಸಕ್ತ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ನಿಗದಿತ ಸಮಯದೊಳಗೆ ಶುಲ್ಕ ಪಾವತಿ ಸೇರಿದಂತೆ ಅಗತ್ಯವಿರುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು ಮುಖ್ಯವಾಗಿದೆ.

KEA B.ED Admission 2026: ಪ್ರಮುಖ ದಿನಾಂಕಗಳು

ಕರ್ನಾಟಕ ಪರೀಕ್ಷೆ ಪ್ರಾಧಿಕಾರ ಪ್ರಕಟಿಸಿರುವ ಬಿ.ಇಡಿ ಕೋರ್ಸಿನ ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ.

 ಪ್ರಮುಖ           ಪ್ರಕ್ರಿಯೆ         ದಿನಾಂಕ         ಸಮಯ
ಅರ್ಜಿ ಸಲ್ಲಿಕೆ ಆರಂಭ    20-11-2026  ಮಧ್ಯಾಹ್ನ 12     ಗಂಟೆ
 ಕೊನೆಯ     ದಿನಾಂಕ    30-11-2026   ರಾತ್ರಿ 11:59
 ಶುಲ್ಕಪಾವತಿ     ಕೊನೆ ದಿನಾಂಕ    02-12-2026   ಸಂಜೆ 6 ಗಂಟೆ
 ವೆಬ್ಸೈಟ್   ಪ್ರಕಟಣೆ    20-11-2026  ಮಧ್ಯಾಹ್ನ     12:00

 

ಇದನ್ನು ಓದಿರಿ: ಗೃಹಲಕ್ಷ್ಮಿ ಯೋಜನೆಯ 3 ಕಂತುಗಳ ₹6,000 ಬಿಡುಗಡೆ! 34, 35, 36ನೇ ಕಂತಿನ ಹಣದ ಮಾಹಿತಿ

ಅಭ್ಯರ್ಥಿಗಳು ಈ ಪ್ರಮುಖ ದಿನಾಂಕಗಳನ್ನು ನಿಮ್ಮ ಗಮನ ಗಮನದಲ್ಲಿಟ್ಟುಕೊಂಡು ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಬಿ.ಇಡಿ ಕೋರ್ಸಿನ ಪ್ರವೇಶತಿಗಾಗಿ ಅರ್ಜಿ ಸಲ್ಲಿಸುವ ವಿಧಾನ

KEA ಮೂಲಕ ಬಿ.ಇಡಿ ಕೋರ್ಸ್ ಪ್ರವೇಶತಿಗಾಗಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಆನ್ಲೈನ್ ವಿಧಾನವನ್ನು ಅನುಸರಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ಸಾಮಾನ್ಯ ಹಂತಗಳು ಹೀಗಿವೆ:

  1. ಮೊದಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ಗ ಭೇಟಿ ನೀಡಿ
  2. ಅಲ್ಲಿ B.ED Admission 2026-27 ಅಧಿಸೂಚನೆಗೆ ಸಂಬಂಧಿಸಿದ  ಮಾಹಿತಿ ಪುಸ್ತಕವನ್ನು ಹುಡುಕಿ
  3. ಅಧಿಕೃತ ಮಾಹಿತಿ ಪುಸ್ತಕದಲ್ಲಿರುವ ಸೂಚನೆಗಳನ್ನು ಪೂರ್ಣವಾಗಿ ಓದಿಕೊಳ್ಳಿ.
  4. ಆನ್ಲೈನ್ ಅರ್ಜಿ ಸಲ್ಲಿಕೆ ವಿಭಾಗವನ್ನು ತೆರೆಯಿರಿ.
  5. ಕೇಳಲಾಗಿರುವ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ಸರಿಯಾಗಿ ನಮೂದಿಸಿ.
  6. ಅಗತ್ಯ ದಾಖಲೆಗಳನ್ನು ಸೂಚಿಸಿರುವ ವಿಧಾನದಲ್ಲಿ ಒದಗಿಸಿ.
  7. ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪರಿಶೀಲಿಸಿ ಪೂರ್ಣಗೊಳಿಸಿ.
  8. ನಿಗದಿತ ಕೊನೆಯ ದಿನಾಂಕದೊಳಗೆ ಶುಲ್ಕ ಪಾವತಿಸಿ.
  9. ಅರ್ಜಿ ಸಲ್ಲಿಸಿದ ನಂತರ ಅದರ ಪ್ರತಿಯನ್ನು ಭವಿಷ್ಯದ ಉಲ್ಲೇಖಕ್ಕಾಗಿ ಉಳಿಸಿಕೊಳ್ಳಿ

ಅರ್ಜಿ ಸಲ್ಲಿಸುವ ಮೊದಲು ಕೆಇಎ ಪ್ರಕಟಿಸಿರುವ ಅಧಿಕೃತ ಮಾಹಿತಿ ಪುಸ್ತಕದಲ್ಲಿನ ಎಲ್ಲಾ ನಿಯಮಗಳನ್ನು ಓದುವುದು ಅತ್ಯಂತ ಪ್ರಮುಖ ಮುಖ್ಯವಾಗಿದೆ.

ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶಗಳು

ಬಿ.ಇಡಿ ಪ್ರವೇಶತಿಗಾಗಿ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಲವು ಪ್ರಮುಖ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಮೊದಲನೆಯದಾಗಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆನ್ಲೈನ್ ಮೂಲಕ ನಡೆಯಲಿದೆ.ಆದ್ದರಿಂದ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಮೂಲಕವೇ ಅರ್ಜಿ ಸಲ್ಲಿಸಬೇಕು.

ಮೊದಲನೆಯದಾಗಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆನ್ಲೈನ್ ಮೂಲಕ ನಡೆಯಲಿದೆ.ಆದ್ದರಿಂದ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಮೂಲಕವೇ ಅರ್ಜಿ ಸಲ್ಲಿಸಬೇಕು.

ಎರಡನೆಯದಾಗಿ ಅರ್ಜಿ ಸಲ್ಲಿಸಲು ನವಂಬರ್ 30 ಕೊನೆಯ ದಿನವಾಗಿದ್ದು ಶುಲ್ಕ ಪಾವತಿಗೆ ಡಿಸೆಂಬರ್ 2 ಕೊನೆಯ ದಿನಾಂಕವಾಗಿದೆ. ಈ ಎರಡು ದಿನಾಂಕಗಳನ್ನು ಅಭ್ಯರ್ಥಿಗಳು ಗೊಂದಲ ಮಾಡಿಕೊಳ್ಳಬಾರದು.

ಮೂರನೆಯದಾಗಿ, ಅರ್ಹತೆ, ಅಗತ್ಯ ದಾಖಲೆಗಳು,ಪ್ರವೇಶಾತಿ ನಿಯಮಗಳು ಮತ್ತು ಈತರ ವಿವರಗಳನ್ನು ತಿಳಿದುಕೊಳ್ಳಬೇಕು KEA ಪ್ರಕಟಿಸಿರುವ ಮಾಹಿತಿ ಪುಸ್ತಕವನ್ನ ಪರಿಶೀಲಿಸಬೇಕು.

ಈ ಪ್ರಕಟಣೆಯಲ್ಲಿ ಅರ್ಹತೆ, ವಯೋಮಿತಿ, ಶುಲ್ಕದ ಮೊತ್ತ ಹಾಗೂ ದಾಖಲೆಗಳ ಸಂಪೂರ್ಣ ಪಟ್ಟಿಯನ್ನು ನೀಡಲಾಗಿಲ್ಲ.ಆದ್ದರಿಂದ ಈ ವಿವರಗಳಿಗಾಗಿ ಅಧಿಕೃತ ಮಾಹಿತಿ ಪುಸ್ತಕವನ್ನ ಪರಿಶೀಲಿಸುವುದು ಅಗತ್ಯವಾಗಿದೆ.

KEA ಅಧಿಕೃತ ವೆಬ್ಸೈಟ್ ನಲ್ಲಿ ಮಾಹಿತಿ ಪರಿಶೀಲಿಸಿ

ಬಿ.ಇಡಿ ಕೋರ್ಸ್ ಪ್ರವೇಶತಿಗಾಗಿ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಕೃತ ವೆಬ್ಸೈಟ್ ಭೇಟಿ ನೀಡಬಹುದು.

ಅಧಿಕೃತ ವೆಬ್ಸೈಟ್:

APPLY LINK

 

ಅಭ್ಯರ್ಥಿಗಳು ವೆಬ್ ಸೈಟ್ ನಲ ಪ್ರಕಟಿಸಿರುವ B.Ed Admission 2026-27 ಅಧಿಸೂಚನೆ ಮತ್ತು ಮಾಹಿತಿ ಪುಸ್ತಕವನ್ನು ಓದಿಕೊಂಡು ನಂತರ ಅರ್ಜಿ ಸಲ್ಲಿಸಬೇಕು.

ಕೊನೆಯ ಮಾತು

ಕರ್ನಾಟಕದಲ್ಲಿ B.Ed course na ಪ್ರವೇಶತಿಗಾಗಿ ಕಾದು ಕುಳಿತಂತ ಅಭ್ಯರ್ಥಿಗಳು ಕೋರ್ಸ್ ನ ಪ್ರವೇಶಾತಿ ಪಡೆಯಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ಕೆಇಎ ಅಧಿಕೃತ ಪ್ರಕಟಿಸಿರುವ ಈ ಅಧಿಸೂಚನೆ ಮಹತ್ವದಾಗಿದೆ.

2026-27 ನೇ ಸಾಲಿನ ಎರಡು ವರ್ಷದ B.Ed ಕೋರ್ಸ್ ನ  ಪ್ರವೇಶಾತಿಗಾಗಿ ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ನವೆಂಬರ್ 20 ರಿಂದ ಆರಂಭವಾಗಲಿದೆ ಮತ್ತು ಕೊನೆಯ ದಿನಾಂಕ ನವೆಂಬರ್ 30 ಆರ್ಜಿ ಸಲ್ಲಿಕೆ ಕೊನೆಯ ದಿನವಾಗಿದೆ.

ಆದ್ದರಿಂದ ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ, ಅಧಿಕೃತ ಮಾಹಿತಿ ಪುಸ್ತಕವನ್ನು ಪರಿಶೀಲಿಸಿ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸುವ ಮೂಲಕ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.

KEA B.Ed Admission 2026: ಹೊರಡಿಸಿರುವ ಮಾಹಿತಿಯನ್ನು ಪರಿಶೀಲಿಸಿ ಅಭ್ಯರ್ಥಿಗಳು ತಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು ಮತ್ತು ಅಧಿಕೃತ ಅಧಿಸೂಚನೆ ಅನ್ನು ಗಮನದಲ್ಲಿಟ್ಟುಕೊಂಡು ಆಸಕ್ತ ಅಭ್ಯರ್ಥಿಗಳು ಕೂಡಲೇ ಆನ್ಲೈನ್ ಅರ್ಜಿಯನ್ನು ಹಾಕಲು ಮುಂದಾಗಿರಿ ಏಕೆಂದರೆ ಸಮಯ ಕಡಿಮೆ ಇರುವದರಿಂದ ತಾಂತ್ರಿಕ ಸಮಸ್ಯೆ ಮತ್ತು ಅರ್ಜಿ ಸಲ್ಲಿಕೆ ಕೊನೆಯ ದಿನಾಂಕದವರೆಗೆ ಕಾಯದೆ ಹೋಗಿ ಹಾಕಿದರೆ server ಅಂತ ಸಮಸ್ಯೆ ಬರುವುದಿಲ್ಲ.ಅದಕ್ಕಾಗಿ ಅಭ್ಯರ್ಥಿಗಳಲ್ಲಿ ಮನವಿ ಮಾಡಿಕೊಳ್ಳುವುದು ಏನಂದರೆ ಆದಷ್ಟು ನಿಮಗೆ ಎಷ್ಟಾಗುತ್ತೆ ಅಷ್ಟು ಬೇಗನೆ ಅಧಿಕೃತ ಮಾಹಿತಿಯನ್ನು ಎಲ್ಲಾ ಪರಿಶೀಲಿಸಿ ಓದಿಕೊಂಡು ಪ್ರಮುಖ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ಮಾಹಿತಿ ಪರಿಶೀಲಿಸಿ ಅರ್ಜಿ ಸಲ್ಲಿಸುವುದು ಉತ್ತಮ.

ಇದನ್ನು ಓದಿರಿ: KEA Recruitment 2026: 5,431 FDC, SDC ಹುದ್ದೆಗಳ ನೇಮಕಾತಿ

Leave a Comment