KEA Lecturer Recruitment 2026: ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ 814 ಉಪನ್ಯಾಸಕರ ಹುದ್ದೆ! Master Degree ಇದ್ರೆ ಸಾಕು, 13 ವಿಷಯಗಳಲ್ಲಿ ಅವಕಾಶ! ಅರ್ಜಿ ಶುರು!
KEA Lecturer Recruitment 2026 – ಒಟ್ಟು ಎಷ್ಟು ಹುದ್ದೆ?
ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಕ್ಕೆ ಕಾಯುತ್ತಿರುವ ನಿರುದ್ಯೋಗಿ ಯುವಕರಿಗೆ ಇದೊಂದು ಬಹಳ ದೊಡ್ಡ ಅವಕಾಶ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ರಾಜ್ಯದ ಎಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ನೇರ ನೇಮಕಾತಿ ವಿಧಾನದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಯ ಆಧಾರದ ಮೇಲೆ ನಡೆಯಲಿದೆ. ಒಟ್ಟು 778 ಹುದ್ದೆಗಳು ಮತ್ತು 36 ಹುದ್ದೆಗಳು ಹೈದ್ರಾಬಾದ್ ಕರ್ನಾಟಕ (HK) ಪ್ರದೇಶಕ್ಕೆ ಸೇರಿ ಒಟ್ಟು 814 ಹುದ್ದೆಗಳು ಭರ್ತಿಯಾಗಲಿವೆ. ಇದು ಕಳೆದ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ನೇಮಕಾತಿ ಪ್ರಕ್ರಿಯೆ 18-10-2024 ರಂದು ಈ ಕುರಿತು ಅಪ್ಡೇಟ್ ನೀಡಲಾಗಿತ್ತು
ಈಗ ಅಂತಿಮವಾಗಿ ಅರ್ಜಿ ಆಹ್ವಾನಕ್ಕೆ ದಿನಾಂಕ ನಿಗದಿಯಾಗಿದೆ.ಮಾಸ್ಟರ್ ಡಿಗ್ರಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಇದು ಜೀವನ ಬದಲಾಯಿಸುವ ಅವಕಾಶ.ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುವುದು ಗೌರವ,ಭದ್ರತೆ ಮತ್ತು ಉತ್ತಮ ಸಂಬಳದ ಕೆಲಸ. ಆದ್ದರಿಂದ ಆಸಕ್ತಿ ಇರುವ ಪ್ರತಿಯೊಬ್ಬ ಅಭ್ಯರ್ಥಿಯು ಕೊನೆಯ ದಿನಾಂಕದವರೆಗೆ ಹೋಗಿ ಕಾಯದೆ ಬೇಗನೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕು.
ವಿಷಯವಾರು ಹುದ್ದೆಗಳ ವಿವರ – 13 ವಿಷಯಗಳಲ್ಲಿ ಅವಕಾಶ
KEA Lecturer Recruitment ಈ ನೇಮಕಾತಿಯಲ್ಲಿ ಒಟ್ಟು 13 ವಿಷಯಗಳಲ್ಲಿ ಹುದ್ದೆಗಳು ಖಾಲಿ ಇವೆ.
- ಕನ್ನಡ ಭಾಷೆ
- ಇಂಗ್ಲಿಷ್ ಭಾಷೆ
- ಇತಿಹಾಸ
- ಅರ್ಥಶಾಸ್ತ್ರ
- ರಾಜ್ಯಶಾಸ್ತ್ರ
- ಸಮಾಜಶಾಸ್ತ್ರ
- ಭೂಗೋಳಶಾಸ್ತ್ರ
- ವಾಣಿಜ್ಯಶಾಸ್ತ್ರ
- ಭೌತಶಾಸ್ತ್ರ
- ರಸಾಯನಶಾಸ್ತ್ರ
- ಗಣಿತಶಾಸ್ತ್ರ
- ಜೀವಶಾಸ್ತ್ರ
- ಗಣಕ ವಿಜ್ಞಾನ
ಈ ಎಲ್ಲಾ ವಿಷಯಗಳಲ್ಲಿ ಉಪನ್ಯಾಸಕರ ಅಗತ್ಯವಿದೆ.ಪ್ರತಿ ವಿಷಯವಾರು ಹುದ್ದೆಗಳ ಸಂಖ್ಯೆ ಬೇರೆ ಬೇರೆಯಾಗಿದೆ.
ಕನ್ನಡ ಉಪನ್ಯಾಸಕರು – 84 ಹುದ್ದೆ
ಕನ್ನಡ ಉಪನ್ಯಾಸಕರಿಗೆ 83 ಹುದ್ದೆಗಳು ಸಾಮಾನ್ಯ ಪ್ರದೇಶದಲ್ಲಿ ಮತ್ತು 01 ಹುದ್ದೆ HK ಪ್ರದೇಶದಲ್ಲಿ ಒಟ್ಟು 84 ಹುದ್ದೆಗಳಿವೆ.
ಇಂಗ್ಲಿಷ್ ಉಪನ್ಯಾಸಕರು – 140 ಹುದ್ದೆ
ಇಂಗ್ಲಿಷ್ ಉಪನ್ಯಾಸಕರಿಗೆ 139 ಹುದ್ದೆಗಳ ಸಾಮಾನ್ಯ ಪ್ರದೇಶದಲ್ಲಿ ಮತ್ತು 01 ಹುದ್ದೆ HK ಪ್ರದೇಶದಲ್ಲಿ ಒಟ್ಟು 140 ಹುದ್ದೆಗಳಿವೆ.
ಇತಿಹಾಸ ಉಪನ್ಯಾಸಕರು – 45 ಹುದ್ದೆ
ಇತಿಹಾಸ ವಿಷಯಕ್ಕೆ ಒಟ್ಟು 45 ಹುದ್ದೆಗಳು ಖಾಲಿ ಇವೆ.
ಅರ್ಥಶಾಸ್ತ್ರ ಉಪನ್ಯಾಸಕರು -85 ಹುದ್ದೆ
ಅರ್ಥಶಾಸ್ತ್ರದಲ್ಲಿ 84 ಹುದ್ದೆಗಳು ಸಾಮಾನ್ಯ ಪ್ರದೇಶದಲ್ಲಿ ಮತ್ತು 01 ಹುದ್ದೆ HK ಪ್ರದೇಶದಲ್ಲಿ ಒಟ್ಟು 85 ಹುದ್ದೆಗಳಿಗವೆ.
ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ – 40 ಹುದ್ದೆ
ರಾಜ್ಯಶಾಸ್ತ್ರಕ್ಕೆ 20 ಹುದ್ದೆಗಳು ಮತ್ತು ಸಮಾಜಸ್ತ್ರಕ್ಕೆ 20 ಹುದ್ದೆಗಳು ಒಟ್ಟು 40 ಹುದ್ದೆಗಳಿವೆ.
ಭೂಗೋಳಶಾಸ್ತ್ರ ಉಪನ್ಯಾಸಕರು – 10 ಹುದ್ದೆ
ಭೂಗೋಳಶಾಸ್ತ್ರಕ್ಕೆ ಒಟ್ಟು 10 ಹುದ್ದೆಗಳು ಖಾಲಿ ಇವೆ.
ವಾಣಿಜ್ಯಶಾಸ್ತ್ರ ಉಪನ್ಯಾಸಕರು – 146 ಹುದ್ದೆ
ವಾಣಿಜ್ಯಶಾಸ್ತ್ರಕ್ಕೆ 145 ಹುದ್ದೆಗಳು ಸಾಮಾನ್ಯ ಪ್ರದೇಶದಲ್ಲಿ ಮತ್ತು 01 ಹುದ್ದೆ HK ಪ್ರದೇಶದಲ್ಲಿ ಒಟ್ಟು 146 ಹುದ್ದೆಗಳಿವೆ.
ಭೌತಶಾಸ್ತ್ರ,ರಸನಶಾಸ್ತ್ರ, ಗಣಿತ, ಜೀವಶಾಸ್ತ್ರ – ತಲಾ 30 ಹುದ್ದೆ
ಭೌತಶಾಸ್ತ್ರಕ್ಕೆ 30 ಹುದ್ದೆಗಳು, ರಸಾಯನಶಾಸ್ತ್ರಕ್ಕೆ 30 ಹುದ್ದೆಗಳು,ಗಣಿತಶಾಸ್ತ್ರಕ್ಕೆ 30 ಹುದ್ದೆಗಳು ಮತ್ತು ಜೀವಶಾಸ್ತ್ರಕ್ಕೆ 30 ಹುದ್ದೆಗಳು ಒಟ್ಟು 120 ಹುದ್ದೆಗಳಿವೆ
ಗಣಕವಿಜ್ಞಾನ ಉಪನ್ಯಾಸಕರು – 108 ಹುದ್ದೆ
ಗಣಕವಿಜ್ಞಾನಕ್ಕೆ 107 ಹುದ್ದೆಗಳು ಸಾಮಾನ್ಯ ಪ್ರದೇಶದಲ್ಲಿ ಮತ್ತು 01 ಹುದ್ದೆ HK ಪ್ರದೇಶದಲ್ಲಿ ಒಟ್ಟು108 ಹುದ್ದೆಗಳು ಭರ್ತಿಯಾಗಲಿವೆ.
KEA Lecturer Recruitment ವಿದ್ಯಾರ್ಹತೆ ಏನು?ಮಾಸ್ಟರ್ ಡಿಗ್ರಿ ನಲ್ಲಿ 55% ಕಡ್ಡಾಯ
ವಿದ್ಯಾರ್ಹತೆ ವಿಷಯಗಳಲ್ಲಿ ಕಟ್ಟು ನಿಟ್ಟಿನ ನಿಯಮಗಳಿವೆ.ಎಲ್ಲಾ ವಿಷಯಗಳ ಉಪನ್ಯಾಸಕರ ಹುದ್ದೆಗಳಿಗೆ ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಮಾಸ್ಟರ್ ಡಿಗ್ರಿಯನ್ನು ಕನಿಷ್ಠ ಸೆಕೆಂಡ್ ಕ್ಲಾಸಿನಲ್ಲಿ ಪೂರ್ಣಗೊಳಿಸಿರಬೇಕು.ಅಂದರೆ ಮಾಸ್ಟರ್ ಡಿಗ್ರಿಯಲ್ಲಿ ಕನಿಷ್ಠ 55% ಅಂಕಗಳನ್ನು ಪಡೆದಿರಬೇಕು.SC ಮತ್ತು ST ವರ್ಗದ ಅಭ್ಯರ್ಥಿಗಳಿಗೆ ಮಾಸ್ಟರ್ ಡಿಗ್ರಿಯಲ್ಲಿ ಕನಿಷ್ಠ 50% ಅಂಕಗಳು ಸಾಕಾಗುತ್ತದೆ.ಜೊತೆಗೆ ಎಲ್ಲಾ ಅಭ್ಯರ್ಥಿಗಳಿಗೆ B.Ed ಪದವಿ ಕಡ್ಡಾಯ B.Ed ಇಲ್ಲದೆ ಅರ್ಜಿ ಒಪ್ಪುವುದಿಲ್ಲ.
ಇದನ್ನ ಓದಿರಿ: KFD Recruitment 2026:SSLC ಪಾಸಾದವರಿಗೆ 750 ಹುದ್ದೆಗಳಿಗೆ ಭರ್ಜರಿ Amazing ಸುವರ್ಣಾವಕಾಶ, ತಕ್ಷಣ ಅರ್ಜಿ ಹಾಕಿ
ಗಣಕ ವಿಜ್ಞಾನಕ್ಕೆ ವಿಶೇಷ ವಿದ್ಯಾರ್ಹತೆ
ಗಣಕ ವಿಜ್ಞಾನ ವಿಷಯದ ವಿಷಯದಲ್ಲಿ ಸ್ವಲ್ಪ ಬದಲಾವಣೆ ಇದೆ. ಗಣಕವಿಜ್ಞಾನ ಉಪನ್ಯಾಸಕರ ಹುದ್ದೆಗೆ MCA, M.SC in Computer Science, M.SC in Computer Applications, M.Tech, ME in Computer Science, information Technology,n computer Technology ವಿಷಯಗಳಲ್ಲಿ ಮಾಸ್ಟರ್ ಡಿಗ್ರಿ ಮಾಡಿದವರು ಕೂಡ ಅರ್ಜಿಯನ್ನು ಹಾಕಬಹುದು.ಆದರೆ ಅವರಿಗೂ ಕನಿಷ್ಠ 55% ಅಂಕಗಳು ಕಡ್ಡಾಯ ಮತ್ತು B.Ed ಇರಬೇಕು.
ವಯೋಮಿತಿ ಎಷ್ಟು? 21 ರಿಂದ 45 ವರ್ಷ
ವಯೋಮಿತಿ ವಿಷಯಗಳಲ್ಲಿ ಕೂಡ ಸ್ಪಷ್ಟ ನಿಯಮಗಳಿವೆ.ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ವಯಸ್ಸು ನಿಗದಿತ ಮಿತಿಯೊಳಗೆ ಇರಬೇಕು.
ಸಾಮಾನ್ಯ ವರ್ಗಕ್ಕೆ ವಯೋಮಿತಿ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 40 ವರ್ಷ ವಯಸ್ಸು ವಯೋಮಿತಿ ಸಡಿಲಿಕೆ ಇದೆ
OBC ವರ್ಗಕ್ಕೆ ವಯೋಮಿತಿ
ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 43 ವರ್ಷ.
SC/ST ವರ್ಗಕ್ಕೆ ವಯೋಮಿತಿ
SC, ST ಮತ್ತು ಪ್ರವರ್ಗ – 1 ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 45 ವರ್ಷ.
ಅರ್ಜಿ ಸಲ್ಲಿಸುವ ದಿನಾಂಕ – ನವೆಂಬರ್ 26 ರಿಂದ ಡಿಸೆಂಬರ್ 25
ಅರ್ಜಿ ಸಲ್ಲಿಸುವ ಅವಧಿ ಬಹಳ ಮುಖ್ಯ. ಅರ್ಜಿ ಸಲ್ಲಿಕೆ 2026 ನವೆಂಬರ್ 26 ರಿಂದ ಪ್ರಾರಂಭವಾಗುತ್ತದೆ.ಅರ್ಜಿಸಲ್ಲಿಸಲು ಕೊನೆಯ ದಿನಾಂಕ 2026 ಡಿಸೆಂಬರ್ 25 ರ ಸಂಜೆ 5:30 ರ ವರೆಗೆ.ಶುಲ್ಕ ಪಾವತಿಸಲು ಕೊನೆಯ ದಿನಾಂಕ 2026 ಡಿಸೆಂಬರ್ 26 ರ ಸಂಜೆ 5:30 ರವರೆಗೆ ಈ ದಿನಾಂಕದ ನಂತರ ಯಾವುದೇ ಕಾರಣಕ್ಕೂ ಅರ್ಜಿ ಸ್ವೀಕರಿಸಲಾಗುವುದಿಲ್ಲ.
ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಏಕೆಂದರೆ ಕೊನೆಯ ದಿನಾಂಕದಂದು ವೆಬ್ಸೈಟ್ನಲ್ಲಿ ಹೆಚ್ಚಿನ ಒತ್ತಡ ಉಂಟಾಗಿ ಸರ್ವರ್ ಸಮಸ್ಯೆಗಳು ಬರಬಹುದು.
ಅರ್ಜಿ ಹಾಕೋದು ಹೇಗೆ? Step by Step
ಅರ್ಜಿ ಹಾಕುವುದು ಹೇಗೆ ಎಂಬುವುದನ್ನು ತಿಳಿಯುವುದು ಬಹಳ ಮುಖ್ಯ. ಅಭ್ಯರ್ಥಿಗಳು KEA ಅಧಿಕೃತ ವೆಬ್ಸೈಟ್ ಆದ cetonline.karnataka.gov.in ಗೆ ಭೇಟಿ ನೀಡಬೇಕು ಅಲ್ಲಿ ಈ ನೇಮಕಾತಿಗೆ ಸಂಬಂಧಿಸಿದ ಲಿಂಕ್ ಕಾಣುತ್ತದೆ.ಅದನ್ನು ಒತ್ತಿ ಅರ್ಜಿ ಫಾರ್ಮ್ ತೆರೆಯಬೇಕು.
Step 1: ವೆಬ್ಸೈಟ್ ಓಪನ್ ಮಾಡಿ
APPLY LINK
ಇದನ್ನ ಓದಿರಿ: KEA ಮಹಿಳಾ ಮೇಲ್ವಿಚಾರಕಿ ನೇಮಕಾತಿ 2026: 141+30 HK ಹುದ್ದೆಗಳು, ಅರ್ಜಿ, ಪರೀಕ್ಷೆ ವಿವರ
Step 2: ಅರ್ಜಿ ಫಾರ್ಮ್ ಭರ್ತಿ ಮಾಡಿ
ಫಾರ್ಮ್ ನಲ್ಲಿ ನಿಮ್ಮ ಕೊನೆಯ ಹೆಸರು, ದಿನಾಂಕ, mobile ಸಂಖ್ಯೆ, email ID ವಿಳಾಸ ವಿದ್ಯಾರ್ಹತೆ, ಜಾತಿ, ಆದಾಯ, ವಿಷಯ, ಜಿಲ್ಲೆ ಕೇಂದ್ರದ ಆಯ್ಕೆ ಎಲ್ಲವನ್ನೂ ಸರಿಯಾಗಿ ಭರ್ತಿ ಮಾಡಬೇಕು.
Step 3: ಫೋಟೋ ಸಿಗ್ನೇಚರ್ upload madi photo ಫೋಟೋ ಇತ್ತೀಚಿನದ್ದಾಗಿರಬೇಕು ಮತ್ತು ಸಿಗ್ನೇಚರ್ ಸ್ಪಷ್ಟವಾಗಿರಬೇಕು.
ಪರೀಕ್ಷೆ ಹೇಗೆ ಇರುತ್ತೆ? 3 ಹಂತದ ಪರೀಕ್ಷೆ
ಆಯ್ಕೆ ಪ್ರಕ್ರಿಯೆಯು ಹೇಗೆ ನಡೆಯುತ್ತದೆ ಎಂಬುವುದನ್ನು ತಿಳಿಯುವುದು ಕೂಡ ಮುಖ್ಯ.ಈ ನೇಮಕಾತಿ ಮೂರು ಹಂತದ ಪರೀಕ್ಷೆಯ ಮೂಲಕ ನಡೆಯಲಿದೆ.
ಕನ್ನಡ ಭಾಷೆ ಪರೀಕ್ಷೆ -1
ಮೊದಲನೆಯದು ಕನ್ನಡ ಭಾಷೆ ಪರೀಕ್ಷೆ ಇದು ಎಲ್ಲಾ ಅಭ್ಯರ್ಥಿಗಳು ಕಡ್ಡಾಯ.ಈ ಪರೀಕ್ಷೆಯಲ್ಲಿ ಒಟ್ಟು 150 ಪ್ರಶ್ನೆಗಳು, 150 ಅಂಕಗಳು ಮತ್ತು 3 ಗಂಟೆಗಳ ಕಾಲಾವಕಾಶವಾಗಿರುತ್ತದೆ.
ನಿರ್ಧಿಷ್ಟ ವಿಷಯ ಪರೀಕ್ಷೆ – 1
ಎರಡನೆಯ ನಿರ್ಧಿಷ್ಟ ವಿಷಯ ಪರೀಕ್ಷೆ -1 ಇದು ನಿಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಇರುತ್ತದೆ.ಇದರಲ್ಲೂ 150 ಪ್ರಶ್ನೆಗಳು, 150 ಅಂಕಗಳು ಮತ್ತು 3 ಗಂಟೆ ಇರುತ್ತದೆ.
ನಿರ್ಧಿಷ್ಟ ವಿಷಯ ಪರೀಕ್ಷೆ -2
ಮೂರನೆಯದು ನಿರ್ಧಿಷ್ಟ ವಿಷಯ ಪರೀಕ್ಷೆ – 2 ಇದರಲ್ಲೂ 150 ಪ್ರಶ್ನೆಗಳು,150 ಅಂಕಗಳು ಮತ್ತು 3 ಗಂಟೆ.ಒಟ್ಟು ಮೂರು ಪರೀಕ್ಷೆಗಳಲ್ಲಿ ಬಂದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ತಯಾರಾಗುತ್ತದೆ.ಪರೀಕ್ಷೆಗಳು ಫೆಬ್ರವರಿ – 2027 ರಲ್ಲಿ ನೆಡೆಯುವ ಸಾಧ್ಯತೆ ಇದೆ.
ಇದನ್ನ ಓದಿರಿ: ಗೃಹಲಕ್ಷ್ಮಿ ಯೋಜನೆ: ಫಲಾನುಭವಿಗಳಿಗೆ ಟೆನ್ಷನ್ ಶುರು! ಮುಂದಿನ ವಾರ ಮನೆ ಮನೆ ಸಮೀಕ್ಷೆ
ಬೇಕಾಗುವ ಮುಖ್ಯವಾದ ಡಾಕ್ಯುಮೆಂಟ್ಸ್ ಯಾವುದು ಬೇಕು?
ಅರ್ಜಿ ಹಾಕಲು ಬೇಕಾಗುವ ದಾಖಲೆಗಳ ಪಟ್ಟಿ ಬಹಳ ಮುಖ್ಯ.
- SSLC ಮಾರ್ಕ್ಸ್ ಕಾರ್ಡ್
- ದ್ವಿತೀಯ ಪಿಯುಸಿ ಮಾರ್ಕ್ಸ್ ಕಾರ್ಡ್
- ಡಿಗ್ರಿ ಮಾರ್ಕ್ಸ್ ಕಾರ್ಡ್
- ಮಾಸ್ಟರ್ ಡಿಗ್ರಿ ಮಾರ್ಕ್ಸ್ ಕಾರ್ಡ್
- B.Ed ಮಾರ್ಕ್ಸ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಪೋಟೋ, ಸಿಗ್ನೇಚರ್
- ಆಧಾರ್ ಕಾರ್ಡ್
ಮೀಸಲಾತಿ ಪ್ರಮಾಣ ಪತ್ರಗಳು RD ಸಂಖ್ಯೆಯನ್ನು ಹೊಂದಿರಬೇಕು.RD ಸಂಖ್ಯೆ ಇಲ್ಲದ ಪ್ರಮಾಣ ಪತ್ರಗಳನ್ನು ಸ್ವೀಕರಿಸುವುದಿಲ್ಲ.ಪ್ರಮಾಣ ಪತ್ರಗಳು ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಮಾನ್ಯವಾಗಿರಬೇಕು.
ಅರ್ಜಿ ಹಾಕುವಾಗ ಈ ತಪ್ಪುಗಳನ್ನ ಮಾಡಬೇಡಿ ಮುಖ್ಯ ಸೂಚನೆ
ಈ ಉದ್ಯೋಗಕ್ಕೆ ಅರ್ಜಿ ಹಾಕುವ ಅಭ್ಯರ್ಥಿಗಳು ಕೆಲವು ಮುಕ್ಯ ವಿಷಯಗಳನ್ನು ಗಮನಿಸಬೇಕು.
ಮೊದಲನೆಯದು, ಅರ್ಜಿಯಲ್ಲಿ ನೀಡಿದ ಮಾಹಿತಿ ತಪ್ಪಾಗಿದ್ದರೆ ಅರ್ಜಿ ತಿರಸ್ಕಾರವಾಗುತ್ತದೆ.ಎರಡನೆಯದು, ಒಂದಕ್ಕಿಂತ ಹೆಚ್ಚು ಅರ್ಜಿ ಹಾಕಿದರೆ ಎಲ್ಲಾ ಅರ್ಜಿಗಳು ತಿರಸ್ಕಾರವಾಗುತ್ತವೆ.ಮೂರನೆಯದು, ಮೀಸಲಾತಿ ಪ್ರಮಾಣ ಪತ್ರ RD ಸಂಖ್ಯೆ ಇಲ್ಲದೆ ಹಾಕಿದರೆ ಮೀಸಲಾತಿ ಸಿಗುವುದಿಲ್ಲ.ನಾಲ್ಕನೆಯದು, ಶುಲ್ಕ ಪಾವತಿ ಯಶಸ್ವಿಯಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಐದನೆಯದು, ಅರ್ಜಿ ಸಲ್ಲಿಸಿದ ನಂತರ ಪ್ರಿಂಟ್ ತೆಗೆದುಕೊಳ್ಳಬೇಕು.
ಇದನ್ನ ಓದಿರಿ: Captain Smit Machchhar – Neerja Bhanot: 40 ಸಾವಿರ ಅಂತರದಲ್ಲಿ ವಿಮಾನ ದುರಂತ ತಪ್ಪಿಸಿದ ಇಬ್ಬರು ಭಾರತೀಯರ ಸಾಹಸ
ಕೊನೆಯ ಮಾತು
KEA Lecturer Recruitment: ಈ ನೇಮಕಾತಿ ಮಾಸ್ಟರ್ ಡಿಗ್ರಿ ಮಾಡಿ ಮನೆಯಲ್ಲಿ ಕಾಯುತ್ತಿರುವ ಯುವಕರಿಗೆ ಬಂಗಾರದ ಅವಕಾಶ.ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದರೆ ಉತ್ತಮ ಸಂಬಳ, ಗೌರವ, ಭದ್ರತೆ ಸಿಗುತ್ತದೆ. ಆದ್ದರಿಂದ ಈ ಅವಕಾಶವನ್ನು ಕಳೆದುಕೊಳ್ಳಬೇಡಿ.ಅರ್ಜಿಯನ್ನು ಹಾಕಲು ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ, ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ, ಶುಲ್ಕ ಪಾವತಿ, ಪರೀಕ್ಷೆಗೆ ಚೆನ್ನಾಗಿ ಓದಿ.ಯಶಸ್ಸು ನಿಮ್ಮದಾಗಲಿ.ಹೆಚ್ಚಿನ ಮಾಹಿತಿಗಾಗಿ ಕೆಇಎ ಅಧಿಕೃತ ವೆಬ್ಸೈಟ್ ಅನ್ನು ನಿರಂತರವಾಗಿ ನೋಡುತ್ತೀರಿ ಶುಭವಾಗಲಿ
ಎಲ್ಲಾ ಅಭ್ಯರ್ಥಿಗಳಿಗೆ ತಿಳಿಯಪಡಿಸುವುದು ಏನೆಂದರೆ ಅಭ್ಯರ್ಥಿಗಳು ಅರ್ಜಿಯನ್ನು ಕೊನೆಯ ದಿನಾಂಕದವರೆಗೆ ಕಾಯದೆ ಬೇಗನೆ ಹೋಗಿ ಅರ್ಜಿಯನ್ನ ಹಾಕಬೇಕು ಏಕೆಂದರೆ ಕೊನೆಯ ದಿನಾಂಕದ ವೇಳೆ ಅರ್ಜಿ ಪ್ರತಿಯನ್ನು ಸಲ್ಲಿಸುವಾಗ ಇಂಟರ್ನೆಟ್ ನಂತಹ ತಾಂತ್ರಿಕ ಸಮಸ್ಯೆ ಆಗಬಹುದು ಆದ ಕಾರಣ ಎಲ್ಲಾ ಅಭ್ಯರ್ಥಿಗಳು ಆನ್ಲೈನ್ ಸೆಂಟರ್ ನಲ್ಲಿ ಅರ್ಜಿಯನ್ನು ಹಾಕವು (KEA) ಅಧಿಕೃತ ವೆಬ್ಸೈಟ್ ನಲ್ಲಿ ಎಲ್ಲ ಮಾಹಿತಿ ಯನ್ನು ಸರಿಯಾಗಿ ಓದಿಕೊಂಡು ಅರ್ಜಿಯನ್ನ ತಪ್ಪಾಗದಂತೆ ಹಾಕಿ ಏಕೆಂದರೆ ಅರ್ಜಿ ತಪ್ಪಾಗಿ ಹಾಕಿದರೆ ಮತ್ತೆ ಅದು ನಿಮಗೆ ಮುಂದೆ ತೊಂದರೆಗಿಡಾಗಬಹುದು ಅದಕ್ಕೆ ಅರ್ಜಿ ಸಲ್ಲಿಸುವ ಮುನ್ನ ಎಲ್ಲಾ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ ಆಮೇಲೆ ಅರ್ಜಿಯನ್ನು ಹಾಕಿರಿ ನನ್ನ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು
KEA Lecturer Recruitment: ನಲ್ಲಿ ಈ ನೇಮಕಾತಿ ಮಾಸ್ಟರ್ ಡಿಗ್ರಿ ಮಾಡಿ ಮನೆಯಲ್ಲಿ ಕಾಯುತ್ತಿರುವ ಯುವಕರಿಗೆ ಬಂಗಾರದ ಅವಕಾಶ.ಸರ್ಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ಕೆಲಸ ಮಾಡಿ ಉತ್ತಮ ಸಂಬಳ, ಗೌರವ, ಮತ್ತು ಸರ್ಕಾರದ ಸವಲತ್ತುಗಳು ಈ ಎಲ್ಲಾ ಸವಲತ್ತುಗಳನ್ನು ಮತ್ತು ಕಾಲೇಜ್ ನಲ್ಲಿ ವಿದ್ಯಾರ್ಥಿಗಳ ಭವಿಷ್ಯ ಮತ್ತು ಉತ್ತಮ ವದಂತಹ ಪಾಠವನ್ನು ಬೋಧಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯಗಳನ್ನು ಕಳಿಸುವ ಎಲ್ಲಾ ಜವಾಬ್ದಾರಿಗಳು ಶಿಕ್ಷಕರ ಮೇಲೆ ಇರುತ್ತದೆ.
ಇದನ್ನ ಓದಿರಿ: KEA B.Ed Admission 2026: Good News! ಎರಡು ವರ್ಷದ ಬಿ.ಇಡಿ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ